ಅದರಲ್ಲೂ ಬೆಳಗ್ಗೆ ಇಡ್ಲಿ, ದೋಸೆ ಇದ್ದರಂತು ಅದರ ಸವಿಯಲು ಸೈಡ್ ಡಿಶ್ ಆಗಿ ಯಾವುದಾದರು ಚಟ್ನಿ ಇರಲೇ ಬೇಕು. ಆದ್ರೆ ಯಾವ ಚಟ್ನಿ ಮಾಡಬೇಕು ಅನ್ನೋದು ಯಾರಿಗೂ ತಿಳಿದಿರುವುದಿಲ್ಲ. ಹೀಗಾಗಿ ನಾವಿಂದು ಈ ರೀತಿ ತಿಂಡಿ ಹಾಗೂ ಊಟದ ಜೊತೆಗೂ ಸವಿಯಬಹುದಾದ ಒಳ್ಳೆಯ ಚಟ್ನಿ ಯಾವುದು ನೋಡೋಣ.
ಬೆಳಗ್ಗೆ ತಿಂಡಿಗೆ ಹೇಳಿ ಮಾಡಿಸಿದ ಚಟ್ನಿ ಅಂದ್ರ ಕಡಲೆ ಬೀಜದ ಚಟ್ನಿ. ಹೌದು ಬೆಳಗ್ಗೆಯ ಎಲ್ಲಾ ತಿಂಡಿಗೂ ಈ ಕಡಲೆ ಬೀಜದ ಚಟ್ನಿ ಸಖತ್ ರುಚಿ ನೀಡುತ್ತದೆ. ಜೊತೆಗೆ ಆರೋಗ್ಯಕ್ಕೂ ಉತ್ತಮವಾದ ಚಟ್ನಿ ಇದಾಗಿದೆ. ಕಡಲೆ ಬೀಜದಲ್ಲಿ ಅತ್ಯುತ್ತಮ ಪ್ರಮಾಣದ ಪ್ರೋಟೀನ್ ಸಿಗಲಿದೆ.
ಹಾಗಾದ್ರೆ ನಾವಿಂದು ಈ ಕಡಲೆ ಬೀಜದ ಚಟ್ನಿ ಮಾಡುವುದು ಹೇಗೆ? ಅದಕ್ಕೆ ಬೇಕಾಗುವ ಪದಾರ್ಥಗಳೇನು? ಎಂಬುದನ್ನು ತಿಳಿದುಕೊಳ್ಳೋಣ.
ಕಡಲೆ ಬೀಜ- 1 ಕಪ್
ಹುರಿ ಗಡಲೆ- 2 tbs
ಉದ್ದಿನಬೇಳೆ - 2 ಚಮಚ
ಹುಣಸೆಹಣ್ಣು - 10 ಗ್ರಾಂ
ಕರಿಬೇವಿನ ಎಲೆಗಳು - 2 tbs
ಬೆಳ್ಳುಳ್ಳಿ - 5 ಪೀಸ್
ಕೆಂಪು ಮೆಣಸಿನ ಪುಡಿ - 1 ಟೀಸ್ಪೂನ್
ಇಂಗು- 1/4 ಟೀಸ್ಪೂನ್
ಒಣ ಕೆಂಪು ಮೆಣಸಿನಕಾಯಿ - 2
ಜೀರಿಗೆ - 1/4 ಟೀಸ್ಪೂನ್
ಸಾಸಿವೆ ಬೀಜಗಳು - 1/4 ಟೀಸ್ಪೂನ್
ರುಚಿಗೆ ಉಪ್ಪು
ಅಡುಗೆ ಎಣ್ಣೆ
ಈ ರೀತಿ ನೀರು ಹಾಕಿದ ಮೇಲೆ ಅದಕ್ಕೆ ಹುಣಸೆ ಹುಳಿ ಹಿಂಡುಕೊಳ್ಳಿ ಬಳಿಕ ಉಪ್ಪು ಹಾಕಿ ಕುದಿಯಲು ಬಿಡಿ. 5 ನಿಮಿಷ ಕುದಿಯಲು ಬಿಟ್ಟು ಒಲೆ ಆಫ್ ಮಾಡಿಕೊಳ್ಳಿ. ಇದಾದ ಬಳಿಕ ತಣ್ಣಗಾಗಲು ಕೆಲ ಹೊತ್ತು ಬಿಡಿ. ತಣ್ಣಗಾದ ಬಳಿಕ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಿ.
ಪೇಸ್ಟ್ನಂತೆ ಬರುವಂತೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ರುಬ್ಬಿಕೊಂಡ ಚಟ್ನಿಗೆ ಸ್ವಲ್ಪ ನೀರು ಹಾಕಿಕೊಳ್ಳಿ. ಈಗ ಇದಕ್ಕೆ ಒಗ್ಗರಣೆ ಮಾಡಿಕೊಳ್ಳಿ. ಒಲೆ ಮೇಲೆ ಪಾತ್ರೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಸಾಸಿವೆ, ಜೀರಿಗೆ, ಕರಿಬೇವು, ಒಣಮೆಣಸು ಹಾಕಿಕೊಳ್ಳಿ, ಬಳಿಕ ಇಂಗು ಒಂದು ಚಿಟಿಕೆ ಅರಶಿಣ ಬೇಕಾದರೆ ಹಾಕಿ ಮಿಕ್ಸ್ ಮಾಡಿ. 2 ನಿಮಿಷ ಕರಿದ ಬಳಿಕ ಒಲೆ ಆಫ್ ಮಾಡಿಕೊಂಡು ಚಟ್ನಿಗೆ ಹಾಕಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಕಡಲೆ ಬೀಜದ ಚಟ್ನಿ ರೆಡಿಯಾಗಿರುತ್ತದೆ. ಇದು ಇಡ್ಲಿ, ದೋಸೆ, ಪೂರಿ, ಚಪಾತಿಗೆ ಹೇಳಿ ಮಾಡಿಸಿದ ಚಟ್ನಿಯಂತೆ ರುಚಿಕರವಾಗಿರುತ್ತೆ. ನೀವು ಸಹ ಒಮ್ಮೆ ಟ್ರೈ ಮಾಡಿ ನೋಡಿ ಇದರ ರುಚಿಗೆ ನೀವು ಸಹ ಫಿದಾ ಆಗುತ್ತೀರಿ. ಇದಕ್ಕೆ ಕಾಯಿ, ಈರುಳ್ಳಿ ಯಾವುದು ಬೇಕಾಗಿಲ್ಲ ಕೆಲವೇ ವಸ್ತು ಬಳಸಿ ಸಿಂಪಲ್ ಆಗಿ ಮಾಡಬಹುದು.